ಕುಂದಾಪುರ ಉಡುಪಿ ಜಿಲ್ಲೆಯಿಂದ ೩೬ ಕಂ ಅಂತರದಲ್ಲಿದೆ , ೧೯೭೩ ರಲ್ಲಿ ಕುಂದಾಪುರ ಪುರಸಬೆಯ ಆರಂಭವಾಯಿತು ------ ಇವೆಲ್ಲ ದಾಖಲೆಗಳಷ್ಟೇ ------- ಬಾಷೆಯ ವಿಷಯಕ್ಕೆ ಬಂದರೆ ನಮಗೆಲ್ಲ ಒಂದು ಸ್ಪೂರ್ತಿಯ ಸೆಲೆ, ಪಕ್ಕದಲ್ಲೇ ಇದ್ದ ತುಳುನಾಡು ನಮ್ಮ ಆಚರಣೆಯ ಮೇಲೆ ಪ್ರಬಾವ ಬೀರಿತೆ ವಿನಃ ನಮ್ಮ ಬಾಷೆಯ ಮೇಲಲ್ಲ ------ ಜಗದ ಮೂಲೆಯಲ್ಲಿ ಕೂಟ ಅಧೆಷ್ಟೋ ನಮ್ಮವರು ನಮ್ಮ ಕನ್ನಡಕ್ಕಾಗಿ ಹಾತೋರಯದೆ ಇರರು --------
ಹಂಗಾರೆ ಎಂಥ ತಡ ಬಡ ಮಾಡುದ್ ------ ಶುರು ಮಾಡುವಲ್ಲೇ!ಕುಂದಾಪುರ ಪುರಸಭೆಯು 1973 ರಲ್
ಲಿ ಸ್ಥಾಪನೆಗೊಂಡಿತು.
ಹ್ವಾಯ್ ಎಲ್ಲ ಹ್ಯಾಂಗ್ ಇದರಿ? ವೂರ್ಬದಿ ನೆಟ್ಟಿ ಆಯ್ತಾ?ಚೀರಿ ಚೀರಿ ಮಳೆ ಬತಿತ್ತ? ಯಾರ್ಯಾರ ಮನ್ಯಾಗ್ ನೆಟ್ಟಿ ಮಾತದ್ದ್ " ಗಣಪತಿ" ಕಾಳ್ ಕೊಟ್ಟೀರ್? ಚೂರ್ ಕಾಯಿ ಮತ್ತೆ ಬೆಲ್ಲ ಕಾಕಂಡ್ ತಿಮ್ಬೂಕ್ ಲೈಕ್ ಅತ್ತ ಅಲ್ದೆ? ನೆಟ್ಟಿ ಮಾಡುವರಿಗೆ ಮಜೂರಿ ಕೊಡೂದು ಕಷ್ಟ ಜನ ಒಟ್ಟ ಮಾಡೂದು ಕಷ್ಟ! ಹೀಂಗೆ ಆರೇ ನೇಲ್ ನೊಗ ಅಟ್ಟಕ್ಕೆ ಹೊತ್ತೋ ಏನೋ ಅಲ್ದಾ? ವೈಶಾಕದಾಗೆ ಗೆಣಗಿಂದೋ, ಉದ್ದಿಂದೋ,ಹೆಲ್ಸಿಂದೋ ಹಪ್ಪಳ ಮಾಡ್ಕಂದೀರೆ ಪಿರಿ ಪಿರಿ ಮಳಿಗೆ ಒಳ್ಳೆ ಆತಿತ್ತ್!
ಹೊಸ ಪೇಜ್ ಮಾಡ್ಕನಕ್ ಅನ್ಕಂಡ್ ಒಂದ್ ಮಾಡದ್ದೆ , ಹ್ಯಾಂಗ್ ಇತ್ತ್? ಕುಂದಾಪುರ ಹೆಸರಿನಾಗೆ ಸುಮಾರ್ ಗ್ರೂಪ್ ಇತ್ತೇ, ಒಂದು ಲೈಕ್ ಇಪೂ ಪೇಜ್ ಮಾಡುವ ಅನ್ಕಂಡ್ , ಕುಂದಾಪ್ರ ಬಾಷೆ , ಕುಂದಾಪುರ ಮತ್ತ ಅವಿಬಜಿತ ದಕ್ಷಿಣ ಕನ್ನಡದ್ದ್ , ಇಲ್ಲಿ ಜನ ಜೀವನ, ಆಚಾರ ವಿಚಾರ, ಒಟ್ಟ ನಮ್ಮತನ ಇಪೂ ಫೋಟೋ ಹಾಕೀನಿ . ಗುಡ್ ಮಾರ್ನಿಂಗ್, ಇವಿನಿಂಗ್, ನೈಟ್ ಹೇಳು ಸಂಬದಪಡದೆ ಇಪ್ಪು ಫೋಟೋ ಬೇಡದೆ !! ಹಾಂಗೆ ಗೂಡ್ಮೊರ್ನಿಂಗ್ ಹೇಳ್ಕಂದಾದ್ರೆ ಕುಂದಾಪುರಕ್ಕೆ ಸಂಬಂದ ಪಟ್ಟ ಫೋಟೋ ಹಾಕಿ ಹೇಳಿ . ಯೆಷ್ಟಾರು "ನಮ್ಮೂರು ಕುಂದಾಪುರ" ಅಲ್ದೆ? (ಕುಂದಾಪುರ ಪುರಸಭೆಯು ಉಡುಪಿಯಿಂದ ಸುಮಾರು 36ಕಿ.ಮೀ ದೂರದಲ್ಲಿರುತ್ತದೆ.
2001ರ ಜನಗಣತಿಯ ಪ್ರಕಾರ ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ 28591 ಜನಸಂಖ್ಯೆಯನ್ನು ಹೊಂದಿರುತ್ತದೆ.
ಕುಂದಾಪುರ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
ಕುಂದಾಪುರ ಪುರಸಭೆಯ ವ್ಯಾಪ್ತಿಯು ಒಟ್ಟು 14.01 ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ.