Kanakapura taluk phto & video graphers association - r.peg

Kanakapura taluk phto & video graphers association - r.peg kanakapura taluk phto & video graphers association(r).

17/06/2017
17/06/2017
25/05/2017

ತ್ರಿವಿಕ್ರಮ (ಡಿಜಿ ಇಮೇಜ್) ರಥವೇರಿ ಅರ್ಜುನ ( ನಾಗೇಶ್ ಜೀ) ಪರಮೇಶಣ್ಣ ಹೇಳಿದಂತೆ ರಥ ಬಂದು ಕನಕಪುರಕ್ಕೆ ತಲಪಿತು

ಇಂದು ದಿನಾಂಕ 24.05.2017ನೇ ಬುಧವಾರ ಡಿಜಿಇಮೇಜ್ ಪ್ರಚಾರ ಅಭಿಯಾನವನ್ನು ರಾಮನಗರ ಜಿಲ್ಲಾ ಸಂಘದ ನೇತೃತ್ವದಲ್ಲಿ ರಾಮನಗರ ಚನ್ನಪಟ್ಟಣ ಮಾಗಡಿ ಕನಕಪುರ ತಾಲ್ಲೂಕಿನ ಸಹಕಾರದೊಂದಿಗೆ ಕನಕಪುರದಲ್ಲಿ ಪ್ರಚಾರ ಅಭಿಯಾನ ಹಮ್ಮಿ ಕೊಂಡು ಹಾಗೂ ರಾಜ್ಯ ಸಂಘದಿಂದ ನಡೆಯುವ ರಾಜ್ಯ ಸನ್ಮನಕ್ಕೆ ಆಯ್ಕೆಯಾದ ಕನಕಪುರ ತಾಲ್ಲೂಕಿನ ಹಿರಿಯ ಗುರುಗಳು ನೀಲ ಮೇಘ ಶ್ಯಾಮ ರವರೆಗೆ ಅಭಿನಂದಿಸುವ ಮೂಲಕ ಜೊತೆಗೆ ಪತ್ರಿಕಾಗೋಷ್ಠಿ ಯಶಸ್ವಿಯಾಗಿ ನಡೆಯಿತು .ಈ ಕಾರ್ಯಕ್ರಮಕ್ಕೆ ಕೆಪಿಎ ಉಪಾಧ್ಯಕ್ಷರಾದ ನಾಗೇಶ್, ಕೆಪಿಎ ನಿರ್ದೇಶಕರು, ವಿಜಯ ರಾಘವನ್ ಹಾಗೂ ಎ.ಎಂ. ಮುರುಳಿ & ಜಿಲ್ಲಾ ಅಧ್ಯಕ್ಷರಾದ ದೊ.ರ. ಸುರೇಶ ಅವರ ನೇತೃತ್ವದಲ್ಲಿ ಕನಕಪುರ ತಾಲ್ಲೂಕಿನ ಸಂಘದ ಸಾಹಕಾರದೊಂದಿಗೆ ಜಿಲ್ಲಾ ಮತ್ತು ತಾಲ್ಲೂಕು ಸಂಘದ ಅಧ್ಯಕ್ಷರು,ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಕನಕಪುರ ತಾಲ್ಲೂಕಿನ ಸದಸ್ಯರು ಭಾಗವಹಿಸಿದ್ದರು

ಈ ವರ್ಷದ ಡಿಜಿಇಮೇಜ್ ನಮ್ಮ ರಾಜ್ಯದ ಛಾಯಾಗ್ರಾಹಕರ ಬದುಕಿನ ಭರವಸೆಗಳ ಇಮೇಜ್, ನಮ್ಮ ಒಗ್ಗಟ್ಟಿನ ಇಮೇಜ್ ನಮ್ಮ ಇಮೇಜ್ ಡಿಜಿ ಇಮೇಜ್ ನಮ್ಮ ಹಬ್ಬ ಛಾಯಾಗ್ರಾಹಕರ ಹಬ್ಬ ಏನೋ ಘೋಷಣೆ ಯಿಂದ ರಥಾ ಮುಂದೆ ಮಂಡ್ಯ ಜಿಲ್ಲೆಗೆ ಸಾಗಿತ್ತು

ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ ಡಿಜಿ ಇಮೇಜ್
ಅಂತರರಾಷ್ಟ್ರೀಯ ವಸ್ತುಪ್ರದರ್ಶನ 2017 ಬರುವ 23,24,25, ನೇ ಜೂನ್ ತಿಂಗಳಲ್ಲಿ ಬೆಂಗಳೂರಿನ, ನೆಲಮಂಗಲ ರಸ್ತೆಯಲ್ಲಿರುವ ನೀಲಕಂಠ ಕನ್ವನಷನ್ ಹಾಲ್ ನಲ್ಲಿ

ಇಂತಿ ನಿಮ್ಮ
ರಾಮನಗರ ಜಿಲ್ಲಾ ಸಂಘ
ಕನಕಪುರ ರಾಮನಗರ ಮಾಗಡಿ ಚನ್ನಪಟ್ಟಣ ತಾಲ್ಲೂಕಿನ ಸಂಘಗಳು

ತ್ರಿವಿಕ್ರಮ (ಡಿಜಿ ಇಮೇಜ್) ರಥವೇರಿ ಅರ್ಜುನ ( ನಾಗೇಶ್ ಜೀ) ಪರಮೇಶಣ್ಣ ಹೇಳಿದಂತೆ ರಥ ಬಂದು  ಕನಕಪುರಕ್ಕೆ ತಲಪಿತು ಇಂದು ದಿನಾಂಕ 24.05.2017ನೇ...
24/05/2017

ತ್ರಿವಿಕ್ರಮ (ಡಿಜಿ ಇಮೇಜ್) ರಥವೇರಿ ಅರ್ಜುನ ( ನಾಗೇಶ್ ಜೀ) ಪರಮೇಶಣ್ಣ ಹೇಳಿದಂತೆ ರಥ ಬಂದು ಕನಕಪುರಕ್ಕೆ ತಲಪಿತು

ಇಂದು ದಿನಾಂಕ 24.05.2017ನೇ ಬುಧವಾರ ಡಿಜಿಇಮೇಜ್ ಪ್ರಚಾರ ಅಭಿಯಾನವನ್ನು ರಾಮನಗರ ಜಿಲ್ಲಾ ಸಂಘದ ನೇತೃತ್ವದಲ್ಲಿ ರಾಮನಗರ ಚನ್ನಪಟ್ಟಣ ಮಾಗಡಿ ಕನಕಪುರ ತಾಲ್ಲೂಕಿನ ಸಹಕಾರದೊಂದಿಗೆ ಕನಕಪುರದಲ್ಲಿ ಪ್ರಚಾರ ಅಭಿಯಾನ ಹಮ್ಮಿ ಕೊಂಡು ಹಾಗೂ ರಾಜ್ಯ ಸಂಘದಿಂದ ನಡೆಯುವ ರಾಜ್ಯ ಸನ್ಮನಕ್ಕೆ ಆಯ್ಕೆಯಾದ ಕನಕಪುರ ತಾಲ್ಲೂಕಿನ ಹಿರಿಯ ಗುರುಗಳು ನೀಲ ಮೇಘ ಶ್ಯಾಮ ರವರೆಗೆ ಅಭಿನಂದಿಸುವ ಮೂಲಕ ಜೊತೆಗೆ ಪತ್ರಿಕಾಗೋಷ್ಠಿ ಯಶಸ್ವಿಯಾಗಿ ನಡೆಯಿತು .ಈ ಕಾರ್ಯಕ್ರಮಕ್ಕೆ ಕೆಪಿಎ ಉಪಾಧ್ಯಕ್ಷರಾದ ನಾಗೇಶ್, ಕೆಪಿಎ ನಿರ್ದೇಶಕರು, ವಿಜಯ ರಾಘವನ್ ಹಾಗೂ ಎ.ಎಂ. ಮುರುಳಿ & ಜಿಲ್ಲಾ ಅಧ್ಯಕ್ಷರಾದ ದೊ.ರ. ಸುರೇಶ ಅವರ ನೇತೃತ್ವದಲ್ಲಿ ಕನಕಪುರ ತಾಲ್ಲೂಕಿನ ಸಂಘದ ಸಾಹಕಾರದೊಂದಿಗೆ ಜಿಲ್ಲಾ ಮತ್ತು ತಾಲ್ಲೂಕು ಸಂಘದ ಅಧ್ಯಕ್ಷರು,ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಕನಕಪುರ ತಾಲ್ಲೂಕಿನ ಸದಸ್ಯರು ಭಾಗವಹಿಸಿದ್ದರು

ಈ ವರ್ಷದ ಡಿಜಿಇಮೇಜ್ ನಮ್ಮ ರಾಜ್ಯದ ಛಾಯಾಗ್ರಾಹಕರ ಬದುಕಿನ ಭರವಸೆಗಳ ಇಮೇಜ್, ನಮ್ಮ ಒಗ್ಗಟ್ಟಿನ ಇಮೇಜ್ ನಮ್ಮ ಇಮೇಜ್ ಡಿಜಿ ಇಮೇಜ್ ನಮ್ಮ ಹಬ್ಬ ಛಾಯಾಗ್ರಾಹಕರ ಹಬ್ಬ ಏನೋ ಘೋಷಣೆ ಯಿಂದ ರಥಾ ಮುಂದೆ ಮಂಡ್ಯ ಜಿಲ್ಲೆಗೆ ಸಾಗಿತ್ತು

ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ ಡಿಜಿ ಇಮೇಜ್
ಅಂತರರಾಷ್ಟ್ರೀಯ ವಸ್ತುಪ್ರದರ್ಶನ 2017 ಬರುವ 23,24,25, ನೇ ಜೂನ್ ತಿಂಗಳಲ್ಲಿ ಬೆಂಗಳೂರಿನ, ನೆಲಮಂಗಲ ರಸ್ತೆಯಲ್ಲಿರುವ ನೀಲಕಂಠ ಕನ್ವನಷನ್ ಹಾಲ್ ನಲ್ಲಿ

ಇಂತಿ ನಿಮ್ಮ
ರಾಮನಗರ ಜಿಲ್ಲಾ ಸಂಘ
ಕನಕಪುರ ರಾಮನಗರ ಮಾಗಡಿ ಚನ್ನಪಟ್ಟಣ ತಾಲ್ಲೂಕಿನ ಸಂಘಗಳು

20/04/2017

ಕನಕಪುರ ತಾಲ್ಲೂಕು ಫೋಟೋ & ವಿಡಿಯೋಗ್ರಾಪರ್ ಸಂಘ( ರಿ ) ವತಿಯಿಂದ

ಸುಮಾಲಸ್ ಕಲರ್ ಲ್ಯಾಬ್ ಬೆಂಗಳೂರು & ರೋಟರಿ ಕನಕಪುರ ಸಹಯೋಗದಿಂದ ಒಂದು ದಿನದ ತರಬೇತಿ ಶಿಬಿರ

ನಮಸ್ಕಾರ.
ಆತ್ಮೀಯ ಛಾಯಾಗ್ರಾಹಕ ಮಿತ್ರರೆ
ಕನಕಪುರ ತಾಲ್ಲೂಕಿನ ಎಲ್ಲ ಫೋಟೋ & ವಿಡಿಯೋ ಛಾಯಾಗ್ರಹಣದ ಬಗ್ಗೆ ನುರಿತ ತಜ್ಞರಾದ ಶ್ರೀಯುತ ಬಾಬು ಜಿ,ಎಸ್ ಮೈಸೂರು ರವರಿಂದ ಎಲ್ಲಾ ಮಾದರಿಯ ಕ್ಯಾಮರಾಗಳ ಬಗೆಗೆ ಕಾರ್ಯಗಾರ ನಡೆಯಲಿದೆ

ದಿನಾಂಕ 26.4.2017.
ಬುಧವಾರ
ಸ್ಥಳ
ರೋಟರಿ ಭವನ. ಕನಕಪುರ. ಸಮಯ. ಬೆಳಿಗ್ಗೆ 9:00 ಘಂಟೆ ಯಿಂದ ಸಂಜೆ 4:30 ರವರಿಗೆ ( ಎಲ್ಲಾ ಮಾದರಿಯ ಕ್ಯಾಮರಾವನ್ನು ಕಡ್ಡಾಯವಾಗಿ ತರಬೇಕು ) ತಾವು ತಮ್ಮ ಸ್ನೇಹಿತರು ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು

ವಿಸೂ.. ಸುಮಾಲಸ್ ಕಲರ್ ಲ್ಯಾಬ್ ನವರಿಂದ ಆಲ್ಬಮ್ ಪ್ರದರ್ಶನ ಇರುತ್ತದೆ ಅದರ ಉಪಯೋಗ ಪಡಿಯೋಣ
🙏🙏🙏🙏🙏🙏🙏🙏
ಕಾರ್ಯಕ್ರಮಕ್ಕೆ ಹತ್ತು ನಿಮಿಷ ಮುಂಚಿತವಾಗಿ ಬರಬೇಕು
ಮತ್ತು ನೀವು ಬರುವದನ್ನು ಒಂದು ದಿನ ಮೊದಲೇ ನೋಂದಣಿ ಮಾಡಬೇಕು (ಊಟ ಕಾಫಿ ಇರುತ್ತದೆ ) ಪ್ರವೇಶ ಉಚಿತ.

ಹೆಸರನ್ನು ನೋಂದಾಯಿಸಲು ಫೋನ್ ನಂ
ಗಿರೀಶ್ ( ಮುರುಡಿ ) 9448104249

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು.ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ...
04/10/2016

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.ಇವರ ಮೊದಲ ಕಥೆ ಲಿಂಗ. ಬಂದ. ಈ ಕಥೆಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇವರ ಪತ್ನಿ ರಾಜೇಶ್ವರಿ. ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಕೇವಲ ಲೇಖನಿ ಹಿಡಿದು ಪರಿಸರ ಕುರಿತು ಬರೆದವರಲ್ಲ, ಕ್ಯಾಮೆರಾವನ್ನು ಬಗಲಿಗೇರಿಸಿಕೊಂಡು ಪಕ್ಷಿಗಳ ಲೋಕವನ್ನು ಸೆರೆಹಿಡಿದ ಅದ್ಭುತ ಛಾಯಾಚಿತ್ರಗಾರ.
ರಾಷ್ಟ್ರಕವಿ ಕುವೆಂಪು ಅವರ ಪುತ್ರರೂ ಆದ ತೇಜಸ್ವಿ ಅವರು, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೆಲೆಸದೆ, ಚಿಕ್ಕಮಗಳೂರಿನ ಆ ಸುಂದರ ತಾಣದಲ್ಲಿ ತೋಟ ನಿರ್ಮಿಸಿಕೊಂಡು ಬದುಕು ನಡೆಸುವ ಮೂಲಕ ಪರಿಸರಕ್ಕೆ ಹತ್ತಿರವಾದವರು ಹಾಗೂ ನಿಸರ್ಗ ಪ್ರೇಮ ಮೆರೆದವರು.
ಬರಹಗಾರರಾಗಿ ಅನೇಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿರುವಂತೆ, ಪ್ರಕೃತಿಯ ಸೊಬಗನ್ನೂ, ಪ್ರಾಣಿ ಪಕ್ಷಿಗಳ ಜೀವನ ವಿಧಾನವನ್ನೂ ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿದವರು. ವಿಶೇಷವಾಗಿ ಕಾನನದಲ್ಲಿ ಸಂಚರಿಸಿ ತೇಜಸ್ವಿಯವರು ಸೆರೆ ಹಿಡಿದಿರುವ ಪಕ್ಷಿ ಸಂಕುಲಗಳ ವೈವಿಧ್ಯಮಯ ಛಾಯಾಚಿತ್ರಗಳನ್ನು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರದರ್ಶಿಸಲಾಗಿದೆ. ನಾನಾ ಪಕ್ಷಿಗಳ ಛಾಯಾಚಿತ್ರದ ಜತೆಗೆ ತೇಜಸ್ವಿ ಅವರ ಭಾವಚಿತ್ರ, ಕುಟುಂಬ ಮತ್ತು ಸ್ನೇಹಿತರೊಂದಿಗೆ ತೆಗೆಸಿರುವ ಅಪರೂಪದ ಕಪ್ಪು ಬಿಳುಪಿನ ಛಾಯಾಚಿತ್ರಗಳು ಇರುವುದು ವಿಶೇಷ.
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಅಶ್ವಿನಿಕುಮಾರ್‌ ‘ವರ್ಷದ ಛಾಯಾಗ್ರಾಹಕಯಲ್ಲಾಪುರ: ನೇಚರ್ ಇನ್ ಫೋಕಸ್ ಕಾರ್ಯಕ್ರಮದ ಆಂಗವಾಗಿ ಬೆಂಗ­ಳೂರಿನ ಚಾನ್ಸರಿ ಪೆವಿಲಿಯನ್‌ ಹೋಟೆಲ್‌­ನಲ್ಲಿ...
04/10/2016

ಅಶ್ವಿನಿಕುಮಾರ್‌ ‘ವರ್ಷದ ಛಾಯಾಗ್ರಾಹಕ
ಯಲ್ಲಾಪುರ: ನೇಚರ್ ಇನ್ ಫೋಕಸ್ ಕಾರ್ಯಕ್ರಮದ ಆಂಗವಾಗಿ ಬೆಂಗ­ಳೂರಿನ ಚಾನ್ಸರಿ ಪೆವಿಲಿಯನ್‌ ಹೋಟೆಲ್‌­ನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಅಶ್ವಿನಿಕುಮಾರ್. ಆರ್.ಭಟ್ ವರ್ಷದ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸಿಂಥೇರಿ ರಾಕ್‌ನಲ್ಲಿ ಸೆರೆ ಹಿಡಿಯಲಾದ ಛಾಯಾಚಿತ್ರಕ್ಕೆ ಪ್ರಶಸ್ತಿ ಸಂದಿದೆ. ಇದೇ ಸ್ಪರ್ಧೆಯಲ್ಲಿ ಅವರು ಸೆರೆ ಹಿಡಿದಿರುವ ಇನ್ನೆರಡು ಚಿತ್ರಗಳಿಗೂ ಪ್ರಶಸ್ತಿ ಲಭಿಸಿವೆ. ವನ್ಯಜೀವಿ ಮತ್ತು ಅದರ ವಾಸಸ್ಥಾನದೊಂದಿಗಿನ ಸೂಕ್ಷ್ಮ ಸಂಬಂಧ ಗುರುತಿಸುವ ವಿಭಾಗದಲ್ಲಿ ಇವರು ಸೆರೆ ಹಿಡಿದಿರುವ ಉಂಚಳ್ಳಿ ಜಲಪಾತದ ಜೊತೆ ಮನಮೋಹಕ ಚಿತ್ರ ಪ್ರಥಮ ಸ್ಥಾನ ಗಳಿಸಿದೆ.

ಜುಲೈ 3ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ಸ್ಪರ್ಧೆ ನಡೆಯಿತು. ಇವರ ಚಿತ್ರಗಳು ವನ್ಯಜೀವಿ ಜಗತ್ತನ್ನು ವಿಭಿನ್ನ ದೃಷ್ಟಿಕೋನದಲ್ಲಿ ಸಾಕ್ಷೀಕರಿಸುವುದಕ್ಕೆ ನಾಂದಿ ಹಾಡಿರುವುದರಿಂದ ನಿರ್ಣಾಯಕ ತಂಡದಿಂದ ಅತೀವ ಪ್ರಶಂಸೆಗೆ ಪಾತ್ರವಾಯಿತು. ಅನಿಮಲ್ ಪೊರ್ಟ್ರೇಟ್ ಎಂಬ ವಿಭಾಗದಲ್ಲೂ ವಿಶೇಷ ಮನ್ನಣೆ ಪ್ರಶಸ್ತಿ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಕಳೆದ ಎಂಟು ವರ್ಷದಿಂದ ಛಾಯಾಚಿತ್ರವನ್ನು ಹವ್ಯಾಸವಾಗಿಸಿ­ಕೊಂಡಿರುವ ಆಶ್ವಿನಿ ಕುಮಾರ್‌ ಆನೇಕ ಚಿತ್ರಗಳು ಲಂಡನ್‌ನ ಬಿಬಿಸಿ ನಡೆಸುವ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಗುರುತಿಸಿಕೊಂಡಿವೆ. ಅನೇಕ ವನ್ಯಜೀವಿ ಸಂಬಂಧಿತ ಪುಸ್ತಕಗಳು ಮತ್ತು ರಾಷ್ಟ್ರೀಯ ಮಟ್ಟದ ಪರಿಸರ ಪತ್ರಿಕೆಗಳು ಇವರು ಸೆರೆ ಹಿಡಿದಿರುವ ಚಿತ್ರಗಳನ್ನು ಬಳಸಿಕೊಳ್ಳುತ್ತಿರುವುದು ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಪಕ್ಷಿವೀಕ್ಷಣೆಯಲ್ಲೂ ತೊಡಗಿಕೊಂಡಿರುವ ಇವರು ದೇಶದ ಅನೇಕ ಪಕ್ಷಿಗಣತಿಯಲ್ಲಿ ಪಾಲ್ಗೊಂಡಿದ್ದಾರೆ.

ಆರು ವರ್ಷಗಳಿಂದ ಹಲವರಿಗೆ ಛಾಯಾಚಿತ್ರ ತರಬೇತಿ ನೀಡುತ್ತಿರುವುದಲ್ಲದೇ ಪಶ್ಚಿಮ ಘಟ್ಟದ ವಿವಿಧೆಡೆಯಲ್ಲಿ ಮಾನ್ಸೂನ್ ಛಾಯಾಚಿತ್ರ ಶಿಬಿರ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಹಾಲಿ ಬೆಂಗಳೂರಿನ ಐ.ಟಿ. ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಪಾಕೃತಿಕ ಸೌಂದರ್ಯವನ್ನ�

ಶ್ರೀ ಬಿ.ಎಸ್.ಶಶಿಧರ್ ನಾಡಿನ ಯಶಸ್ವಿ ರಾಜ್ಯಾಧ್ಯಕ್ಷರು.ಕರ್ನಾಟಕ ಛಾಯಾಗ್ರಾಹಕರ ಸಂಘದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಹಾರಿಸಿದ ಮಾಹಾನ್ ಸಾಧಕ....
28/09/2016

ಶ್ರೀ ಬಿ.ಎಸ್.ಶಶಿಧರ್ ನಾಡಿನ ಯಶಸ್ವಿ ರಾಜ್ಯಾಧ್ಯಕ್ಷರು.ಕರ್ನಾಟಕ ಛಾಯಾಗ್ರಾಹಕರ ಸಂಘದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಹಾರಿಸಿದ ಮಾಹಾನ್ ಸಾಧಕ...
ಆತ್ಮೀಯ ಛಾಯಾಗ್ರಾಹಕ ಬಂಧುಗಳೇ..
ಇಂದಿನ ನಮ್ಮ ಸಾಧಕ... ನಿಜಕ್ಕೂ ನಾಡಿನ ಛಾಯಾಗ್ರಹಕರ ಏಳಿಗೆಗಾಗಿ ತನ್ನ ಅನುಪಮ ಸೇವೆಯನ್ನು ಮಾಡುತ್ತಾ ಇಡೀ ನಾಡಿನ ಛಾಯಾಗ್ರಾಹಕರ ಏಳಿಗೆಗಾಗಿ ಅವಿರತವಾಗಿ, ನಿಸ್ವಾರ್ಥವಾಗಿ ಶ್ರಮಿಸುತ್ತಿರುವ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕೆಪಿಎ ಅಧ್ಯಕ್ಷರಾದ ಶ್ರೀ ಬಿ.ಎಸ್.ಶಶಿಧರ್...
ಶಶಿಧರ್ ಪದವಿಧರರಾಗಿ ನಂತರ
ಪೂರ್ಣಿಮಾ ರವರನ್ನು ಕೈಹಿಡಿದು ಅನಿರುದ್ಧನ ಪ್ರೀತಿಯ ತಂದೆಯಾಗಿ ಸುಖೀ ಕುಟುಂಬದಲ್ಲಿರುವ
ಶಶಿಧರ್, ರಾಜ್ಯಸಂಘಕ್ಕೆ ಪ್ರವೇಶ ಮೊದಲು ಆಂತರಿಕ ಲೆಕ್ಕಪರಿಶೋಧಕರಾಗಿ ಸೇವೆಸಲ್ಲಿಸಿ, ನಂತರ ರಾಜ್ಯ ಸಂಘದ ಉಪಾಧ್ಯಕ್ಷರಾಗಿ ಸೇವೆ ನಿರ್ವಹಿಸಿದ ಆನಂತರ 2010-11ರಿಂದ ,2016 ಇಲ್ಲಿಯ ವರೆವಿಗೂ ಸತತವಾಗಿ ಮೂರು ಬಾರಿ ರಾಜ್ಯ ಸಂಘದ ಅಧ್ಯಕ್ಷರಾಗಿ ಚುನಾವಣೆಯಿಂದ ಆಯ್ಕೆಯಾದ ಮೊದಲ ಕೆಪಿಎ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.
ಶಶಿಧರ್ ಕೆಪಿಎ ರಾಜ್ಯ ಸಂಘಕ್ಕೆ ಅಧ್ಯಕ್ಷರಾಗಿ ಮೊದಲು ಬಂದಾಗ ಅವತ್ತಿನ ದಿನ ರಾಜ್ಯ ಸಂಘ ಕೇವಲ ಬೆಂಗಳೂರಿನ ಒಂದು ಸಂಘವಾಗಿತ್ತೇ ವಿನಹ ರಾಜ್ಯದ ಬೇರೆ ಯಾವುದೇ ರಾಜ್ಯದ ಜಿಲ್ಲಾ ತಾಲ್ಲೂಕು ಸಂಘಕ್ಕೆ ಹೆಚ್ಚು ಸಂಪರ್ಕದಲ್ಲಿ ಇರಲಿಲ್ಲ, ಈ ಅಪವಾದದಿಂದ ಮುಕ್ತ ಗೊಳಿಸಿದ ಕೀರ್ತಿ ಶಶಿಧರ್ ಗೆ ಸಲ್ಲುತ್ತದೆ.
ಶಶಿಧರ್ ಕೆಪಿಎ ಸಂಘಕ್ಕೆ ಅಧ್ಯಕ್ಷರಾಗಿ ಬಂದಕೂಡಲೇ ಮಾಡಿದ ಮತ್ತೊಂದು ಕೆಲಸ ರಾಜ್ಯ ಸಂಘದಲ್ಲಿದ್ದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ ಮೊದಲು ನಾವು ಸರಿ ಇದ್ದರೆ ಇಡೀ ರಾಜ್ಯವನ್ನು ನಮ್ಮೊಂದಿಗೆ ಕೊಂಡೊಯ್ಯಬಹುದು ಎನ್ನುವ ಭಾವನೆಯಿಂದ ರಾಜ್ಯ ಸಂಘವನ್ನು ಸ್ವಚ್ಛಗೊಳಿಸಿದರು. ಹಾಗೇ ಕೇವಲ ಸಂಘ ನೆಪಮಾತ್ರಕ್ಕೆ ಇದ್ದರೆ ಸಾಲದು ಛಾಯಾಗ್ರಾಹಕರ ನೋವು - ನಲಿವಿಗೆ ಸ್ಪಂದಿಸುವ ಅವಕಾಶ ವಾಗಬೇಕು ಎಂದರಿತು ರಾಜ್ಯ ಮಟ್ಟದ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳ ಸಮಾವೇಶವನ್ನು ಮಾಡಿದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾದರು...
ಶಶಿಧರ್ ಅಧ್ಯಕ್ಷರಾದ ಬಳಿಕ ಕೆಪಿಎ ಸಂಘಕ್ಕೆ ಪರ್ವಕಾಲ ಪ್ರತಿಯೊಂದು ಕೆಲಸವೂ ಇತಿಹಾಸಗಳಲ್ಲಿ ಉಳಿಯುವಂತಹ ಕೆಲಸವಾಯಿತು. "ಕೆಪಿಎ ನಡೆ ರಾಜ್ಯದ ಪ್ರತಿಯೊಂದು ಜಿಲ್ಲಾ ಮತ್ತು ತಾಲ್ಲೊಕುಗಳ ಕಡೆ " ಎಂದು ಸಾರಿ ಹೇಳಿದ ಮೊದಲ ಅಧ್ಯಕ್ಷ ಶಶಿಧರ್....
ಶಶಿಧರ್ ಅಧ್ಯಕ್ಷರಾದ ಮೇಲೆ ರಾಜ್ಯ ಸಂಘದಿಂದ "ಕೆಪಿಎ ಛಾಯಾಸ್ಪಂದ ವಾರ್ತಾ ಪತ್ರಿಕೆಯನ್ನು" ಉಚಿತವಾಗಿ ನಾಡಿನ ಛಾಯಾಗ್ರಾಹಕರಿಗೆ ಅವರವರ ಮನೆಬಾಗಿಲಿಗೆ ತಲುಪಿಸುತ್ತಿದ್ದು ಇದೂ ಒಂದು ಹೆಮ್ಮೆಯ ವಿಚಾರ.
ಛಾಯಾಗ್ರಾಹಕರಿಗೆ ಕಾರ್ಯಕ್ರಮಗಳ ನಿಮಿತ್ತ ಓಡಾಡುವಾಗ ಆಗುತ್ತಿದ್ದ ಪೋಲೀಸ್ ಉಪಟಳವನ್ನು ಸರ್ಕಾರದೊಂದಿಗೆ ಚರ್ಚಿಸಿ ಅದಕ್ಕೊಂದು ಮಾರ್ಗಸೂಚಿ ಕಂಡುಹಿಡಿದಿದ್ದು ಇದೇ ಶಶಿಧರ್ ಕಾಲದಲ್ಲೇ, ಛಾಯಾಗ್ರಾಹಕರ ನೋವು-ನಲಿವಿಗೆ ಕೇವಲ ಮಾತಿನಲ್ಲಿ ಸ್ಪಂದಿಸಿದರೆ ಸಾಲದು ಅದಕ್ಕೆ ಆರ್ಥಿಕ ಸಂಕಷ್ಟದಲ್ಲಿರುವ ಛಾಯಾಗ್ರಾಹಕನಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಛಾಯಾಗ್ರಾಹಕರ ಕಲ್ಯಾಣ ನಿಧಿ ಟ್ರಸ್ಟ್ ಸ್ಥಾಪಿಸಿದ್ದೂ ಸಹ ಶಶಿಧರ್ ಅವಧಿಯಲ್ಲೇ. ಈ ಕಲ್ಯಾಣ ನಿಧಿ ಟ್ರಸ್ಟ್ ನಿಂದ ಹತ್ತು ಹಲವಾರು ನೊಂದ ಕುಟುಂಬಗಳಿಗೆ ಆಸರೆಯಾಗಿದೆ ಇದಕ್ಕೆ ನಾವು ಸಾಧಕರ ಸಾಲಿನಲ್ಲಿ ಶಶಿಧರ್ ರವರನ್ನು ನೋಡಲೇ ಬೇಕಲ್ಲವೇ...
ಒಬ್ಬ ಸಾಮಾನ್ಯ ಛಾಯಾಗ್ರಾಹಕ ಒಂದು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮಾಡುವುದು ಬಹಳ ದುಸ್ಸಾಹಸದ ಕೆಲಸ ಅನ್ನುವ ಸಮಯದಲ್ಲಿ ಕರ್ನಾಟಕದಲ್ಲಿ 4 ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮಾಡಿ ಯಶಸ್ವಿಯನ್ನು ಸಾಧಿಸಿ
ಇಡೀ ಭಾರತ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವೇ ತಾನೆ...ಕೆಪಿಎ ಅಜೀವ ಸದಸ್ಯರಿಗಾಗಿ ಅಭಯಹಸ್ತ ಪ್ರಾರಂಭಿಸಿದ್ದು ಇವರ ಸಾಧನೆಯೇ, ಕೆಪಿಎ ರಾಜ್ಯ ಸಂಘವೆಂದರೆ ಅದು ಸಮಗ್ರ ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕುಗಳ ಒಕ್ಕೂಟವಾದರೆ ಮಾತ್ರ ಒಗ್ಗಟ್ಟು ಸಾಧ್ಯ ಎಂದು ಪ್ರತಿ ಜಿಲ್ಲೆಯನ್ನು ರಾಜ್ಯ ಸಂಘದೊಂದಿಗೆ ಮಾನ್ಯತೆ ಹೊಂದುವಂತೆ ಮಾಡಿದ್ದು ಇವರ ಕಾಲದಲ್ಲೇ. ಹಾಗೇ ಕೇವಲ ರಾಜ್ಯ ಸಂಘದಲ್ಲೇ ಅಧಿಕಾರ ಉಳಿದರೆ ಸಾಲದು ಇಡೀ ರಾಜ್ಯದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಂಡು ರಾಜ್ಯಸಂಘಕ್ಕೆ ನೆರವಾಗಲಿ ಎಂದು ಕೆಪಿಎ ರಾಜ್ಯಕಮಿಟಿ ವಲಯವಾರು ವಿಂಗಡನೆ ಮಾಡಿದ ಕೀರ್ತಿ ಶಶಿಧರ್ ಗೆ ಸಲ್ಲಬೇಕು...
ಕೆಪಿಎ ಸಂಘದಲ್ಲಿ ಮತ್ತೊಂದು ಮೈಲಿಗಲ್ಲು ಎಂದರೆ ಕೆಪಿಎನ ಆರ್ಥಿಕ ಪರಿಸ್ಥಿತಿ ಪಾತಳದಲ್ಲಿತ್ತು ಅಂತಹ ಹಣಕಾಸು ವ್ಯವಸ್ಥೆಯನ್ನು ನೂರು ಪಟ್ಟು ಹೆಚ್ಚಿಸಿದ ಹೆಗ್ಗಳಿಕೆ ಶಶಿಧರ್ ರವರಿಗೆ ಸಲ್ಲಬೇಕು.... ಹೀಗೆ ಹೇಳುತ್ತಾಹೊದರೆ ಒಂದೆ, ಎರಡೇ ಹಲವಾರು ಜನೋಪಯೋಗಿ ಕೆಲಸಗಳನ್ನು ರಾಜ್ಯದ ಛಾಯಾಗ್ರಾಹಕರಿಗೆ ಮಾಡಿರುವ ಶಶಿಧರ್ ತನ್ನ ಸ್ವಂತ ಕೆಲಸಕ್ಕೂ ಮನ್ನಣೆ ನೀಡದೆ ಹಗಲಿರುಳು ನಾಡಿನ ಛಾಯಾಗ್ರಾಹಕರಿಗಾಗಿ
ಏನಾದರೂ ಸಹಾಯ ಮಾಡಲೇಬೇಕು, ಅವರಿಗೆ ನನ್ನಿಂದ ತೃಣವಾದರು ಸಹಕಾರವಾಗಲೇ ಬೇಕು ಎಂದು ನಿಸ್ವಾರ್ಥವಾಗಿ ಇಡೀ ಕುಟುಂಬವೇ ರಾಜ್ಯದ ಛಾಯಾಗ್ರಾಹಕರ ಸೇವೆಗೆ ನಿಂತಿದೆ.... ಇಂತಹ ಅಪರೂಪದ ಸಾಧಕನಿಗೆ ನಾಡಿನ ಸಮಸ್ತ ಛಾಯಾಗ್ರಾಹಕರ ಪರವಾಗಿ ಅಭಿನಂದನೆಗಳು ಹೇಳಲೇಬೇಕು....

ಕರ್ನಾಟಕದ ಹೆಸರಾಂತ ಛಾಯಾಗ್ರಾಹಕ ಶ್ರೀ ಟಿ.ಎನ್.ಎ.ಪೆರುಮಾಳ್ ವನ್ಯ ಜೀವಿ ಛಾಯಾಗ್ರಹಣದ ಅಗ್ರಮಾನ್ಯ ಸಾಧಕ. ಕರ್ನಾಟಕದ ಛಾಯಾಗ್ರಾಹಣ ಕ್ಷೇತ್ರಕ್ಕೆ ...
27/09/2016

ಕರ್ನಾಟಕದ ಹೆಸರಾಂತ ಛಾಯಾಗ್ರಾಹಕ ಶ್ರೀ ಟಿ.ಎನ್.ಎ.ಪೆರುಮಾಳ್ ವನ್ಯ ಜೀವಿ ಛಾಯಾಗ್ರಹಣದ ಅಗ್ರಮಾನ್ಯ ಸಾಧಕ. ಕರ್ನಾಟಕದ ಛಾಯಾಗ್ರಾಹಣ ಕ್ಷೇತ್ರಕ್ಕೆ ಹೆಮ್ಮೆಯ ಗರಿ, ನಿಮಗಿದೋ ನಾಡಿನ ಸಮಸ್ತ ಛಾಯಾಗ್ರಾಹಕರ ಅಭಿನಂದನೆಗಳು... ನೀವು ನೂರ್ಕಾಲ ಬಾಳಿರಿ, ನಮ್ಮನ್ನು ಬರಿಸಿರಿ...

TNA PERUMAL

Thanjavur Nateshachary Ayyamperumal is a doyen of wildlife photography in India. It may not be farfetched to christen him the father of Indian wildlife photography. Born in 1932, TNA Perumal, as he is known to many, began serious bird photography in 1960. He became a member of the Mysore Photographic Society in Bangalore in 1961 and the Federation of Indian Photography in 1962. He was awarded the Artiste FIAP in Nature Photography in 1963 and the Excellence FIAP in 1968. He has more than 1500 acceptances in National and International Salons and more than 200 awards and Certificates of Merit to his credit. He received the National Press Council Award for Industrial Photography in 1975 and the Karnataka Lalit Kala Academy Award for Nature Photography in 1995. He is also the recipient of many national and international honours that include: The Associateship of the Royal Photographic Society of United Kingdom (ARPS - 1977) and Fellowship of the Royal Photographic Society of United Kingdom (FRPS - 1978) in Nature Photography, Master Photographer of the French Federation de l’ Art Photographique (1983) in Nature Photography, Fellowship of the Society of Nature Photographers New Delhi, Honorary Membership of the Youth Photographic Society Bangalore, Honorary Fellowship of the India International Photographic Council New Delhi - (1993), Honorary Fellowship of Pakistan Salon Group and Certificate of appreciation for contribution to wildlife photography by Sanctuary Asia in 2008.

With such national and international recognition for his work and style, not to mention his pioneering contributions to Indian wildlife photography and his expertise with his art and its tools, we have great pleasure in using the seasoned experience of TNA Perumal to select and comment upon the contributions to the LIFESCAPES forum of our web site. We are sure that you will benefit from the presence of TNA Perumal on our panel as much as we are privileged to have a veteran of his stature be associated with us.

Finally, we would like to remind you, lest he be remembered more for his past achievements, that Mr.Perumal still “shoots”. His preferred camera today is a Nikon D-200 DSLR with a 70-300 VR zoom lens. He is a consummate reader of wildlife literature, nature and ornithology. He reveals to us that his all time favorites are “With a camera in Tiger land“ by F.W. Champion and “Jungle Lore” by Jim Corbett.

ಶ್ರೀಯುತ ಬಿ.ಶ್ರೀನಿವಾಸ್ ವಿಶ್ವವಿಖ್ಯಾತ ವನ್ಯಜೀವಿ ಛಾಯಾಗ್ರಾಹಕರು. ಕರ್ನಾಟಕ... ಛಾಯಾಗ್ರಹಣ ಕ್ಷೇತ್ರದ ಸಾಧೆನೆಯ ಮೇರು ಪರ್ವತ... ಶ್ರೀಯುತರು ...
27/09/2016

ಶ್ರೀಯುತ ಬಿ.ಶ್ರೀನಿವಾಸ್ ವಿಶ್ವವಿಖ್ಯಾತ ವನ್ಯಜೀವಿ ಛಾಯಾಗ್ರಾಹಕರು. ಕರ್ನಾಟಕ... ಛಾಯಾಗ್ರಹಣ ಕ್ಷೇತ್ರದ ಸಾಧೆನೆಯ ಮೇರು ಪರ್ವತ... ಶ್ರೀಯುತರು ಕರ್ನಾಟಕದ ಛಾಯಾಗ್ರಹಣದ ಹೆಮ್ಮೆ.. ನಿಮಗಿದೊ ನಾಡಿನ ಛಾಯಾಗ್ರಾಹಕರ ಹೃದಯ ಪೂರ್ವಕ ಅಭಿನಂದನೆಗಳು

ಕರ್ನಾಟಕ ಛಾಯಾಗ್ರಹಣ ಕ್ಷೇತ್ರದ ಮತ್ತೊಂದು ಲೆಜೆಂಡ್ ಅಂದರೂ ತಪ್ಪಾಗಲಾರದು, ಅದರಲ್ಲೂ ಛಾಯಾಗ್ರಹಣ ವಿಚಾರವಾಗಿ ಇಡೀ ವಿಶ್ವವೇ ಕರ್ನಾಟಕದ ಕಡೆ ನೋಡುವಂತೆ ಮಾಡಿದ ಮಹಾನ್ ಪ್ರತಿಭೆ
ಬಿ. ಶ್ರೀನಿವಾಸ್ ಅಂತಹ ಸಾಧಕರಲ್ಲಿ ಒಬ್ಬರು. ಗುರು ಸಿ.ರಾಜಗೋಪಾಲ್ ಅವರಿಂದ ಪ್ರಭಾವಿತರಾಗಿ, ಅವರ ಮಾರ್ಗದರ್ಶನದಲ್ಲಿ ಈ ರಂಗದ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಂಡು ಅಪಾರ ಸಂಯಮ ಬೇಡುವ, ವನ್ಯಜೀವಿ ಛಾಯಾಗ್ರಾಹಣದ ಕಲೆಯನ್ನು ಭಾರತದಲ್ಲಿ ತಂತ್ರಜ್ಞಾನ ಇನ್ನೂ ಕಣ್ಣುಬಿಡುತ್ತಿರುವಾಗಲೇ ಕರಗತ ಮಾಡಿಕೊಂಡರು. ೨೯ರ ಹರೆಯದಲ್ಲೇ ಇಂಗ್ಲೇಂಡಿನ ಪ್ರತಿಷ್ಟಿತ ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಅಸೋಸಿಯೇಟ್‍ಶಿಪ್ ಪಡೆದರು, ಆನಂತರದ್ದೆಲ್ಲ ಇತಿಹಾಸ. ಎಫ್.ಆರ್.ಪಿ.ಎಸ್, ಎಫ್.ಐ.ಏ.ಪಿ , ಇತ್ಯಾದಿ ವಿಶ್ವ ಮಟ್ಟದಲ್ಲಿ ಇರುವ ಎಲ್ಲಾ ಪ್ರತಿಷ್ಟಿತ ಪ್ರಶಸ್ತಿಗಳೂ ಮನೆಯ ಶೋಕೇಸಿನಲ್ಲಿ ಜಾಗ ಪಡೆದುಕೊಂಡವು. ಎಮ್.ಎಫ್.ಐ.ಏ.ಪಿ ಅಂತೂ ೩೫ನೇ ವಯಸ್ಸಿನಲ್ಲಿ - ಈ ಗೌರವ ಪಡೆದ ವಿಶ್ವದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಯೊಂದಿಗೇ ಬಂತು. ರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಮಾನ್ಯತೆಗಳಿಗಂತೂ ಲೆಖ್ಖವೇ ಇಲ್ಲ. ಪಿಕ್ಟೊರಿಯಲ್ ಮತ್ತು ವನ್ಯಜೀವಿ ಈ ಎರಡೂ ವಿಭಾಗಗಳಲ್ಲಿ ರಾಯಲ್ ಫೋಟೊಗ್ರಫಿಕ್ ಸೊಸೈಟಿ ಎಫ್.ಆರ್.ಪಿ.ಎಸ್. ಡಿಸ್ಟಿಂಕ್ಶನ್ ಗೌರವ ಕೊಟ್ಟು ಗೌರವಿಸಿತು. ಈ ದಾಖಲೆಯನ್ನು ಭಾರತದಲ್ಲಿ ಈವರೆಗೂ ಯಾರಿಗೂ ಸರಿಗಟ್ಟಲಾಗಿಲ್ಲ ಎಂಬುದು ಕರ್ನಾಟಕದ ಮತ್ತೊಂದು ಹೆಮ್ಮೆ!
ಕಪ್ಪು-ಬಿಳುಪೇ ಆಗಲಿ, ವರ್ಣಪಾರದರ್ಶಿಕೆಗಳೇ ಆಗಲಿ ಎಳ್ಳಷ್ಟೂ ಹುಳುಕಿಲ್ಲದ ನಿಖರತೆ, ನೆರಳು-ಬೆಳಕಿನಾಟದ ಕುಶಲತೆ ಇವರ ಕೃತಿಗಳನ್ನು ಜೀವಂತವಾಗಿಸುತ್ತವೆ. ಶ್ರೀನಿವಾಸ್ ಈ ಹೊತ್ತಿನ ಕರ್ನಾಟಕದ ಬಹುತೇಕ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ’ಬಾಸ್’ ಅಷ್ಟೇ ಆಗಲಿಲ್ಲ, ದೇಶದ ಉದ್ದಗಲ ಇರುವ ಎಲ್ಲಾ ಕಾಡುಮೇಡುಗಳಲ್ಲಿನ ವನ್ಯಜೀವಿಗಳ ಚಿತ್ರ ತೆಗೆದು ಪ್ರದರ್ಶಿಸಿ, ಆ ಮೂಲಕ ಸಮಾಜದಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾದರು. ಕಪ್ಪು-ಬಿಳುಪು ಫಿಲಮ್ ಕ್ಯಾಮೆರಾಗಳಿಂದ ಹಿಡಿದು ಇವತ್ತಿನ ಅತ್ಯಾಧುನಿಕ ಡಿಜಿಟಲ್ ಕ್ಯಾಮೆರಾ ಯುಗದದವರೆಗೂ ತನ್ನದೆ ಛಾಪು ಮೂಡಿಸಿ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಹೆಸರನ್ನು ಛಾಯಾಗ್ರಹಣ ಕ್ಷೇತ್ರದಲ್ಲಿ ಅಜರಾಮರವಾಗಿಸಿದ್ದಾರೆ. ಇಂಥಹ ಮಹಾನ್ ಪ್ರತಿಭೆಗೆ ಫೆಡೆರೇಶನ್ ಆಫ್ ಇಂಡಿಯನ್ ಫೋಟೊಗ್ರಫಿಯು ’೧೫ನೇ ಅಂತರ್ರಾಷ್ಟ್ರೀಯ ವನ್ಯಜೀವಿ ವಿಶ್ವಕಪ್’ ನಲ್ಲಿ ಕರ್ನಾಟಕದ ಮತ್ತೊಬ್ಬ ಪ್ರತಿಭಾನ್ವಿತ ಛಾಯಾಗ್ರಾಹಕ ಟಿ.ಎನ್.ಎ. ಪೆರುಮಾಳ್ ಅವರೊಟ್ಟಿಗೆ ಕೂತು ಜಾಗತಿಕ ಮಟ್ಟದಲ್ಲಿ ವಿಜೇತರನ್ನ ಆರಿಸುವ ಜವಾಬ್ದಾರಿ ಕೊಟ್ಟು ತನ್ನ ಗೌರವವನ್ನ ತಾನೇ ಹೆಚ್ಚಿಸಿಕೊಂಡಿದೆ.
ಇಂದಿಗೂ ನಮ್ಮೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀನಿವಾಸ್ ಛಾಯಾಗ್ರಾಹಣದ ಆಸಕ್ತರನ್ನು ಪ್ರೋತ್ಸಾಹಿಸುತ್ತಾ ಛಾಯಾಗ್ರಹಣಕ್ಕೆ ಇಂದಿಗೂ ಸೇವೆಸಲ್ಲಿಸುತ್ತಿದ್ದಾರೆ...
ಇಂತಹ ಅಪರೂಪದ ದೈತ್ಯಪ್ರತಿಭೆ ನಮ್ಮೊಂದಿಗೆ ಅದರಲ್ಲೂ ಅವರ ಕಾಲಘಟ್ಟದಲ್ಲಿ ನಾವಿರುವುದೇ ನಮ್ಮ ಭಾಗ್ಯ ಅಲ್ಲವೇ.. ಶ್ರೀಯುತರು ನೂರ್ಕಾಲ ಆರೋಗ್ಯವಾಗಿರಲಿ ಛಾಯಾಗ್ರಹಣ ಸೇವೆ ಮಾಡುತ್ತಿರಲಿ ಎಂದು ನಾಡಿನ ಸಮಸ್ತ ಛಾಯಾಗ್ರಾಹಕರ ಪರವಾಗಿ ಹಾರೈಸೋಣ.....
ನಿಮ್ಮ ಸಾಧನೆ ನಾಡಿನ ಛಾಯಾಗ್ರಹಣಕ್ಕೆ ಒಂದು ಕಳಶಪ್ರಾಯ ನಮ್ಮೆಲ್ಲರ ಹೃದಯ ಪೂರ್ವಕ ಅಭಿನಂದನೆಗಳು

Address

Kanakapura
562117

Website

Alerts

Be the first to know and let us send you an email when Kanakapura taluk phto & video graphers association - r.peg posts news and promotions. Your email address will not be used for any other purpose, and you can unsubscribe at any time.

Share

Category