13/02/2023
ಗರಗ ಕಲ್ಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ
ಧಾರವಾಡ: ಧಾರವಾಡ ತಾಲೂಕಿನ ಗರಗ ಮಡಿವಾಳೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮೀಜಿ ಭಾನುವಾರ ಬೆಳಗಿನಜಾವ ಲಿಂಗೈಕ್ಯರಾಗಿದ್ದರು.
ಇಂದು ವಿಧಿ ವಿಧಾನಗಳು ಮೂಲಕ ಶ್ರೀಗಳಿಗೆ ದೇಸಾಯಿ ಕುಟುಂಬದಿಂದ ಗೌರವಪೂರ್ವಕ ಅಂತಿಮ ನಮನ ಸಲ್ಲಿಸಲಾಯಿತು.
ಶ್ರೀಗಳ ಅಂತಿಮಯಾತ್ರೆಯ ಮೆರವಣಿಗೆ ಹಂಗರಕಿ ಗ್ರಾಮದಿಂದ ಹೊರಟು, ಗರಗ ಗ್ರಾಮದಲ್ಲಿ ಸಂಚರಿಸಲಿದೆ. ನಂತರ ಶ್ರೀಮಠದ ಆವರಣದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ.